

17th October 2024

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೊನೆಗೂ ಕಣ್ತೆರೆದು, ಎಚ್ಚೆತ್ತುಕೊಂಡAತೆ ಕಾಣುತ್ತಿದ್ದು, ಪಾಲಿಕೆಯ ಅಧಿಕಾರಿಗಳು ಇಂದು ವಿವಿಧ ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅತಿಕ್ರಮಣಿಕೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ಶುರುವಿಟ್ಟುಕೊಂಡಿದ್ದಾರೆ.
ಈಗ್ಗೆ ಕೆಲ ತಿಂಗಳುಗಳ ಹಿಂದೆಯೂ ಕೂಡಾ ಅಲ್ಲಲ್ಲಿ `ಫುಟ್ಪಾತ್’ ತೆರವು ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಕೈ ಹಾಕಿದ್ದರಾದರೂ, ಅದು ನಿರಂತರವಾಗಿ ನಡೆದಿರಲಿಲ್ಲ. ಇದೀಗ ಪುನಃ ಪಾಲಿಕೆಯ ವತಿಯಿಂದ ಪ್ರಮುಖ ರಸ್ತೆಗಳಲ್ಲಿ `ಫುಟ್ಪಾತ್’ಗಳ ಒತ್ತುವರಿಯನ್ನು ತೆರವುಗೊಳಿಸುವ ಕೆಲಸಕ್ಕೆ ಮತ್ತೆ ಚಾಲನೆ ನೀಡಲಾಗಿದೆ.
ಪ್ರತಿ ಬುಧವಾರ ಕಾರ್ಯಾಚರಣೆ: ನಗರ ಪಾಲಿಕೆ ಅಧಿಕಾರಿಗಳು ಇನ್ನು ಮುಂದೆ ಪ್ರತಿ ಬುಧವಾರದಂದು ವಿವಿಧ ಪ್ರದೇಶ, ಬಡಾವಣೆ, ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳಲ್ಲಿ, ರಸ್ತೆಗಳಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ. ನಗರದಲ್ಲಿ ಸುಗಮ ಸಂಚಾರಕ್ಕೆ ಇದರಿಂದ ಉಪಯೋಗವಾಗಲಿದೆ ಎನ್ನಬಹುದು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು, ಮೇಯರ್ ಹಾಗೂ ಶಾಸಕರು, ಚುನಾಯಿತ ಪ್ರತಿನಿಧಿಗಳು ಪ್ರಸ್ಥಾಪಿಸಿ, ಚರ್ಚಿಸಿ ಕೈಗೊಂಡ ನಿರ್ಣಯದಂತೆ `ಫುಟ್ಪಾತ್’ಗಳಲ್ಲಿನ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಬುಧವಾರ ಮೂರು ವಲಯಗಳ ವಿವಿಧೆಡೆಗಳಲ್ಲಿ ಸಕಲ ಸಿಬ್ಬಂದಿಯೊAದಿಗೆ ಅಧಿಕಾರಿಗಳು ತೆರಳಿ `ಫುಟ್ಪಾತ್’ಗಳಲ್ಲಿನ ಯಾವುದೇ ರೀತಿಯ ಒತ್ತುವರಿ ತೆರವುಗೊಳಿಸಲಿದ್ದಾರೆ, ಪಾದಾಚಾರಿಗಳು ಓಡಾಡಲು ಯಾವುದೇ ತೊಂದರೆ, ಕಿರಿಕಿರಿಯಾಗದಂತೆ ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ತಿಳಿಸಿದ್ದಾರೆ.
ನಗರದ 2, 18 ಹಾಗೂ ಇತರೆ ವಾರ್ಡ್ನಲ್ಲಿ ಇಂದು ಪಾಲಿಕೆಯ ಅಧಿಕಾರಿ, ಸಿಬ್ಬಂದಿಯವರು ಟ್ರಾಕ್ಟರ್, ಜೆಸಿಬಿ ಯಂತ್ರಗಳೊAದಿಗೆ ತೆರಳಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಬೆಂಗಳೂರು ರಸ್ತೆಯ ಬಳಿಯಲ್ಲಿನ ಕಾಳಮ್ಮ ರಸ್ತೆ, ಡಾ||ರಾಜ್ಕುಮಾರ್ರಸ್ತೆಯಲ್ಲಿನ ಎಂ.ಜಿ.ರಸ್ತೆ, ಇನ್ನಿತರೆಡೆ ಈ ಕಾಯಾಚರಣೆ ನಡೆಸಿ ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ಬುಧವಾರ ಮರ್ನಾಲ್ಕು ವಲಯಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರುವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕಮೀಷನರ್ ಖಲೀಲ್ಸಾಬ್ ಸ್ಪಷ್ಟವಾಗಿ ನುಡಿದಿದ್ದಾರೆ.
ವಾರಕ್ಕೆರಡು ಬಾರಿ ಕಾರ್ಯಾಚರಣೆ ನಡೆಸಿ: `ಫುಟ್ಪಾತ್’ ಒತ್ತುವರಿ ತೆರವುಗೊಳಿಸುವಂತೆ ಕಳೆದ ಅನೇಕ ದಿನಗಳಿಂದಲೂ ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಇತರೆ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಆಗ್ರಹಿಸುತ್ತಾ ಬಂದಿರುವ, ಸಾಮಾಜಿಕ ಹೋರಾಟಗಾರರೂ ಆಗಿರುವ ಅಂದ್ರಾಳ್ ಸೇವಾ ಸಂಘದ ಅಧ್ಯಕ್ಷ ಆರ್.ವೆಂಕಟರೆಡ್ಡಿಯವರು ನಗರ ಶಾಸಕ ನಾರಾಭರತ್ರೆಡ್ಡಿ ಸೇರಿದಂತೆ, ಪಾಲಿಕೆ ಮೇಯರ್ ನಂದೀಶ್, ಆಯುಕ್ತ ಖಲೀಲ್ಸಾಬ್ ಹಾಗೂ ಇತರೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ವಾರಕ್ಕೆ ಎರಡು ದಿನ ಈ ಕಾರ್ಯಾಚರಣೆ ನಡೆಸುವಂತೆ ಕೋರಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ